NEW UPDATES

ಆತ್ಮೀಯರೆ, ಈ ವೆಬ್ ಸೈಟ್ (WEBSITE) ಜಾಹೀರಾತು ರಹಿತ ವೆಬ್ ಸೈಟ್ ಆಗಿರುತ್ತದೆ. ಒಂದು ವೇಳೆ ಜಾಹೀರಾತು ಪ್ರದರ್ಶನವಾದಲ್ಲಿ ಜಾಹೀರಾತಿಗೂ ಹಾಗೂ ಈ ವೆಬ್ ಸೈಟ್ ನ ವಾರಸುದಾರರಿಗೂ ಯಾವುದೇ ರೀತಿಯ ಸಂಬಂಧವಿರುವುದಿಲ್ಲ. ಈ ವೆಬ್ ಸೈಟ್ ಅನ್ನು ಕೇವಲ ಸೇವಾ ಮನೋಭಾವದ ಹಿತದೃಷ್ಟಿಯಿಂದ ಹಾಗೂ ರಾಜ್ಯದ ಸಮಸ್ತ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಕಾಂಕ್ಷಿಗಳಿಗೆ ನೆರವಾಗಲಿ ಎಂಬ ಶೈಕ್ಷಣಿಕ ಹಿತದೃಷ್ಟಿಯಿಂದ ರಚಿಸಲಾಗಿದ್ದು, ಇಲ್ಲಿ ಸಿಗುವ ಎಲ್ಲಾ ಸಂಪನ್ಮೂಲಗಳು ಮುಕ್ತ ಸಂಪನ್ಮೂಲಗಳಾಗಿರುತ್ತವೆ. ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ @All COPY RIGHTS RESERVED.

NEW  ಮಾಜಿ ಸೈನಿಕರ ಕೋಟಾದಡಿ ಜಿಪಿಟಿ ಹುದ್ದೆಗೆ ಆಯ್ಕೆಯಾಗಿರುವ ಅಭ್ಯರ್ಥಿಯ ಮೂಲ ಮಾಜಿ ಸೈನಿಕರ ಪ್ರಮಾಣ ಪತ್ರದ ನೈಜತೆ ನೀಡುವ ಕುರಿತು

NEW  ಶಾಲಾ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು/ ಸಿಬ್ಬಂದಿಗಳು EEDS ತಂತ್ರಾಂಶದ ಮೂಲಕ ರಜೆಗೆ ಅರ್ಜಿ ಸಲ್ಲಿಸುವ ಬಗ್ಗೆ ಹಾಗೂ ಏಳನೇ ವೇತನ ಶ್ರೇಣಿ ಹಾಗೂ ವೇತನವನ್ನು EEDS ತಂತ್ರಾಂಶದಲ್ಲಿ ಇಂದೀಕರಿಸುವ ಬಗ್ಗೆ

NEW  ಗೌ. ನ್ಯಾಯಮೂರ್ತಿಗಳಾದ ಶ್ರೀ ಎಚ್ ಎನ್ ನಾಗಮೋಹನ್ದಾಸ್ ಏಕ ಸದಸ್ಯ ವಿಚಾರಣಾ ಆಯೋಗದಿಂದ ಪರಿಶಿಷ್ಟ ಜಾತಿ ಒಳ ಮೀಸಲಾತಿ ಕುರಿತಂತೆ, ಪರಿಶಿಷ್ಟ ಜಾತಿಯ ನೌಕರರ ಮಾಹಿತಿಯನ್ನು ನೀಡುವ ಕುರಿತು

NEW  2025-26ನೇ ಸಾಲಿನ‌ಲ್ಲಿ KMERC ಇಲಾಖೆಯ CEPMIZ Project ಆರ್ಥಿಕ ಅನುದಾನದಡಿಯಲ್ಲಿ ರಾಜ್ಯದ ನಾಲ್ಕು ಜಿಲ್ಲೆಗಳ 10 ಗಣಿಬಾಧಿತ ತಾಲೂಕುಗಳ ವ್ಯಾಪ್ತಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ 1-10ನೇ ತರಗತಿ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಟಿಕ ಆಹಾರ ವಿತರಿಸುವ ಕಾರ್ಯಕ್ರಮವನ್ನು ಸುಗಮವಾಗಿ ಅನುಷ್ಠಾನಗೊಳಿಸಲು SOP ನೀಡುವ ಬಗ್ಗೆ

NEW  2024-25ನೇ ಸಾಲಿನ PM POSHAN ಮಾರ್ಚ್/ಏಪ್ರಿಲ್ 2025ರ ಶಾಲಾ ದಿನಗಳಿಗೆ ಶಾಲೆಗಳಲ್ಲಿ ಆಹಾರ ಧಾನ್ಯಗಳ ಕೊರತೆಯಾದಲ್ಲಿ ಸ್ಥಳೀಯ ಮಾರುಕಟ್ಟೆಯಲ್ಲಿ ಖರೀದಿಸಲು ಅನುಮತಿ ನೀಡಿರುವ ಬಗ್ಗೆ

NEW  ಕರ್ನಾಟಕ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ English language Enrichment course ( ELEC) ಆಯೋಜಿಸಲು ಅಗತ್ಯವಿರುವ mentors(week-9) ತರಬೇತಿಗೆ ಸಪ್ಪನ್ಮೂಲ ಶಿಕ್ಷಕರನ್ನು ನಿಯೋಜಿಸುವ ಕುರಿತು

NEW  2025-26ನೇ ಸಾಲಿನ‌ ಆದರ್ಶ ವಿದ್ಯಾಲಯಗಳ 6ನೇ ತರಗತಿಯ ದಾಖಲಾತಿಗಾಗಿ ನಡೆಸುವ ಪ್ರವೇಶ ಪರೀಕ್ಷೆಗೆ ವಿವಿಧ ಹಂತದ ಅಧಿಕಾರಿಗಳು ನಿರ್ವಹಿಸಬೇಕಾದ ಕರ್ತವ್ಯಗಳು ಮತ್ತು ಜವಾಬ್ದಾರಿಗಳು

NEW  2025ರ ಮಾರ್ಚ್/ಏಪ್ರಿಲ್ ಮಾಹೆಯಲ್ಲಿ ನಡೆಯುವ SSLC ಮುಖ್ಯ ಪರೀಕ್ಷೆಗೆ ಅನಧಿಕೃತವಾಗಿ ನೋಂದಾಯಿಸಿರುವ ವಿದ್ಯಾರ್ಥಿಗಳನ್ನು ರದ್ದುಪಡಿಸಿರುವ ಕುರಿತು

NEW  March/April -2025ರ SSLC ಪರೀಕ್ಷೆ -1ರ ಪರೀಕ್ಷಾ ಕೇಂದ್ರ ಮುಖ್ಯಸ್ಥರ ಲಾಗಿನ್ ಕುರಿತು

NEW  2024-25ನೇ ಸಾಲಿನ ಮರುಸಿಂಚನ ಕಾರ್ಯಕ್ರಮದ ಸಾಪಲ್ಯ ಮೌಲ್ಯಮಾಪನವನ್ನು ಹಮ್ಮಿಕೊಳ್ಳುವ ಬಗ್ಗೆ REVISED ORDER

NEW  ರಾಜ್ಯ ಸರ್ಕಾರಿ ನೌಕರರಿಗೆ ಒಂದು ಕೋಟಿ ಅಪಘಾತ ವಿಮೆ ಕುರಿತು ಸದನದಲ್ಲಿ ಮಾನ್ಯ ಮುಖ್ಯಮಂತ್ರಿಗಳು ನೀಡಿದ ಮಾಹಿತಿ

NEW  ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಿಗೆ 2025-26 ನೇ ಸಾಲಿನಲ್ಲಿ 6ನೇ ತರಗತಿಗೆ ಪ್ರವೇಶ ಸಂಬಂಧ ಸೇವಾ ಸಿಂಧು ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಿರುವ ಕುರಿತು

NEW  ರಾಷ್ಟ್ರೀಯ ಆವಿಷ್ಕಾರ ಅಭಿಯಾನದ ಸಪ್ತಾಹ 2024-25ರ ಉಪಯೋಗಿತಾ ಪ್ರಮಾಣ ಪತ್ರವನ್ನು ಸಲ್ಲಿಸುವ ಕುರಿತು ಮತ್ತು ಗೂಗಲ್ ಫಾರಂನಲ್ಲಿ ಅಪ್ಲೋಡ್ ಮಾಡುವ ಬಗ್ಗೆ

NEW  ದಿನಾಂಕ : 16-04-2025 ರಿಂದ ನಡೆಯುವ UGCET ಪ್ರವೇಶ ಪರೀಕ್ಷಾ ಕೇಂದ್ರಗಳನ್ನು ಗುರುತಿಸಿ ಅಗತ್ಯ ಸಹಕಾರ ನೀಡುವ ಕುರಿತು

NEW  2024-25ನೇ ಸಾಲಿನ ಮರುಸಿಂಚನ ಕಾರ್ಯಕ್ರಮದ ಸಾಫಲ್ಯ ಮೌಲ್ಯಮಾಪನವನ್ನು [End line assessment] ಹಮ್ಮಿಕೊಳ್ಳುವ ಬಗ್ಗೆ

NEW  2024-25ನೇ ಸಾಲಿನ SSLC ಪರೀಕ್ಷೆ - 1ಕ್ಕೆ ಸಂಬಂಧಿಸಿದಂತೆ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ನಿರ್ವಹಿಸಬೇಕಾದ ಕರ್ತವ್ಯಗಳು ಮತ್ತು ಜವಾಬ್ದಾರಿಗಳ ಕುರಿತ ಮಾರ್ಗಸೂಚಿ

NEW  2024-25ನೇ ಸಾಲಿನ ಶಿಕ್ಷಕರ ಸಾಮಾನ್ಯ ವರ್ಗಾವಣೆ ಸಂಬಂಧ ಪೂರ್ವಭಾವಿ ಚಟುವಟಿಕೆಗಳ ಭಾಗವಾಗಿ ಡಿಸೆಂಬರ್ 2024ರ ಅಂತ್ಯಕ್ಕೆ ಶಿಕ್ಷಕರ ವೇಟೆಡ್ ಅಂಕಗಳನ್ನು ತಂತ್ರಾಂಶದಲ್ಲಿ ಪ್ರಕಟಿಸಿರುವ ಬಗ್ಗೆ | ALL DISTRICTS PRIMARY + GPT TEACHERS WEIGHTAGE SCORE LIST HIGH SCHOOL TEACHERS LIST

NEW  EEDS ತಂತ್ರಾಂಶದಲ್ಲಿ ಶಿಕ್ಷಕರ, ಅಧಿಕಾರಿಗಳ, ಬೋಧಕೇತರ ನೌಕರರ ಸೇವಾ ವಿವರಗಳನ್ನು ಗಣಕೀಕರಿಸಿ ಅಂತಿಮಗೊಳಿಸುವ ಬಗ್ಗೆ

NEW  2024-25ನೇ ಸಾಲಿನ‌ SA - 2 ಮಾದರಿ ಪ್ರಶ್ನೆ ಪತ್ರಿಕೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ WEBSITE ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು, ಮತ್ತೊಮ್ಮೆ ಈ WEBSITE ಗೆ ಭೇಟಿ ನೀಡಿ. ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ... ವಂದನೆಗಳು.



TBF AND SBF






















ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯಲ್ಲಿ ಆಜೀವ ಸದಸ್ಯತ್ವ ನೊಂದಣಿ ಪಡೆಯದೇ ಇರುವ ಶಿಕ್ಷಕರು ಆಜೀವ ಸದಸ್ಯತ್ವ ನೋಂದಣಿಯನ್ನು ಪಡೆಯುವ ಕುರಿತು


2022-23 ನೇ ಸಾಲಿಗೆ ಶಿಕ್ಷಕರ ಮಕ್ಕಳಿಗೆ ಪ್ರತಿಭಾವಂತ ವಿದ್ಯಾರ್ಥಿ ವೇತನ ಮಂಜೂರು ಮಾಡಲು ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸುವ ಬಗ್ಗೆ


ಶಿಕ್ಷಕರ ಕಲ್ಯಾಣ ನಿಧಿ ವಿದ್ಯಾರ್ಥಿ ವೇತನಕ್ಕಾಗಿ Online ಅರ್ಜಿ ನಮೂನೆ


ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗ ಧನ ಸಹಾಯಕ್ಕಾಗಿ ಅರ್ಜಿ ಸಲ್ಲಿಸಲು ಬೇಕಾಗುವ ಮಾಹಿತಿಗಳ ವಿವರ


ಹೊಸ ಅಜೀವ ಸದಸ್ಯತ್ವ ಗುರುತಿನ ಕಾಡುಗಳನ್ನು Online ಮೂಲಕ ವಿತರಿಸುವ ಬಗ್ಗೆ ಮತ್ತು ಈಗಾಗಲೇ ಆಜೀವ ಸದಸ್ಯತ್ವ ನೋಂದಣಿ ಸಂಖ್ಯೆ ಪಡೆದು ಭೌತಿಕ ಕಾರ್ಡ್ ಹೊಂದಿರುವ ಶಿಕ್ಷಕರೂ ಸಹ ಕಡ್ಡಾಯವಾಗಿ ತಮ್ಮ ವಿವರಗಳನ್ನು ಸಂಬಂಧಿಸಿದ online portalನಲ್ಲಿ ನಮೂದಿಸುವ ಕುರಿತು ಹಾಗೂ Flow chart


ಶಿಕ್ಷಕರ ಕಲ್ಯಾಣ ನಿಧಿಯ ಆನ್ಲೈನ್ ಸೇವೆಗಾಗಿ ಇಲ್ಲಿ ಕ್ಲಿಕ್ ಮಾಡಿ


USER MANUAL


ಶಿಕ್ಷಕರ ಕಲ್ಯಾಣ ನಿಧಿ ಹಾಗೂ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿಯಿಂದ ದೊರಕುವ ವಿವಿಧ ಸೌಲಭ್ಯಗಳ ಮಾಹಿತಿ ಪುಸ್ತಕ




ಕ್ರ.ಸಂ

ವಿವರ

ಡೌನ್‌ಲೋಡ್ ಲಿಂಕ್

01

ಅಜೀವ ಸದಸ್ಯತ್ವಕ್ಕಾಗಿ ಅರ್ಜಿ ನಮೂನೆ ಇಲ್ಲಿ ಕ್ಲಿಕ್ ಮಾಡಿ

Click Here 

02

ಶಿಕ್ಷಕರ ಕಲ್ಯಾಣ ನಿಧಿಯಿಂದ ಅಧಿಕಾರಿಗಳಿಗೆ ,ಶಿಕ್ಷಕರಿಗೆ laptop ಖರೀದಿಸಲು ನೀಡುವ ಮುಂಗಡ ಅರ್ಜಿ ನಮೂನೆ ಇಲ್ಲಿ ಕ್ಲಿಕ್ ಮಾಡಿ

Click Here 

03

ವಿದ್ಯಾರ್ಥಿಗಳಿಗೆ ವೈದ್ಯಕೀಯ ಚಿಕಿತ್ಸೆ ಗಾಗಿ ಧನಸಹಾಯ ಕೋರಿ ಅರ್ಜಿ ಇಲ್ಲಿ ಕ್ಲಿಕ್ ಮಾಡಿ

Click Here 

04

ಶಿಕ್ಷಕರಿಗೆ ವೈದ್ಯಕೀಯ ಚಿಕಿತ್ಸೆ ಗಾಗಿ ಧನಸಹಾಯ ಕೋರಿ ಅರ್ಜಿ ಇಲ್ಲಿ ಕ್ಲಿಕ್ ಮಾಡಿ

Click Here

05

ಶಿಕ್ಷಕರ ಮಕ್ಕಳಿಗೆ ಉನ್ನತ ವ್ಯಾಸಂಗಕ್ಕಾಗಿ ಧನ ಸಹಾಯ ಕೋರುವ ಅರ್ಜಿ ನಮೂನೆ ಇಲ್ಲಿ ಕ್ಲಿಕ್ ಮಾಡಿ

Click Here 

06

ಮರಣ ಹೊಂದಿದ ಶಿಕ್ಷಕರ ಕುಟುಂಬ ನಿರ್ವಹಣೆಗಾಗಿ ಧನಸಹಾಯ ಮಂಜೂರಾತಿ ಅರ್ಜಿ ನಮೂನೆ ಇಲ್ಲಿ ಕ್ಲಿಕ್ ಮಾಡಿ

Click Here 

07

ಪ್ರತಿಭಾ ಶಿಷ್ಯವೇತನಕ್ಕಾಗಿ ಅರ್ಜಿ ಇಲ್ಲಿ ಕ್ಲಿಕ್ ಮಾಡಿ

Click Here 

08

Financial assistant form ಇಲ್ಲಿ ಕ್ಲಿಕ್ ಮಾಡಿ

Click Here 

09

ಸಂಕೇತ ಸಂಖ್ಯೆ ಪಡೆಯಲು ಅರ್ಜಿ ನಮೂನೆ ಇಲ್ಲಿ ಕ್ಲಿಕ್ ಮಾಡಿ

Click Here 


ಆಜೀವ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಲು ಸಂಸ್ಥೆಯ ಮುಖ್ಯಸ್ಥರ ಪ್ರಮಾಣ ಪತ್ರ


TBF Online Registrationಗಾಗಿ‌ ಅಗತ್ಯ ನಮೂನೆಗಳ ಮಾದರಿ


BEO LOGIN CREATION CREDENTIALS


ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯಡಿಯಲ್ಲಿ ಶಿಕ್ಷಕರಿಗೆ ನೀಡಲಾಗುತ್ತಿರುವ ಸೌಲಭ್ಯಗಳು:

1) ಶಿಕ್ಷಕರಿಗೆ ಹಾಗೂ ಅವರ ಅವಲಂಬಿತರಿಗೆ ವೈದ್ಯಕೀಯ ಧನ ಸಹಾಯ :

ಶಿಕ್ಷಕರಿಗೆ / ನಿವೃತ್ತ ಶಿಕ್ಷಕರಿಗೆ ಹಾಗೂ ಅವರ ಅವಲಂಬಿತರಿಗೆ ಖಾಯಿಲೆಯ ತೀವ್ರತೆಯನ್ನು ಆಧರಿಸಿ ಗರಿಷ್ಠ ರೂ. 50,000/- ಗಳ ಮಿತಿಗೊಳಪಟ್ಟು ವೈದ್ಯಕೀಯ ಧನ ಸಹಾಯವನ್ನು ನೀಡಲಾಗುತ್ತಿದೆ


2) ಸೇವೆಯಲ್ಲಿರುವಾಗ ಹಾಗೂ ನಿವೃತ್ತಿಯ ನಂತರ ಮೃತ ಹೊಂದಿದ ಶಿಕ್ಷಕರ ಕುಟುಂಬಗಳಿಗೆ ಕುಟುಂಬ ನಿರ್ವಹಣೆಗಾಗಿ ಧನ ಸಹಾಯ :

ಸರ್ಕಾರಿ ಮತ್ತು ಅನುದಾನಿತ ಶಾಲಾ ಶಿಕ್ಷಕರು ಸೇವೆಯಲ್ಲಿರುವಾಗಲೇ / ನಿವೃತ್ತಿಯ ನಂತರ ಮೃತಪಟ್ಟಲ್ಲಿ ಅವರ ವಾರಸುದಾರರಿಗೆ ಕುಟುಂಬ ಪಿಂಚಣಿ ಮಂಜೂರಾತಿಗೆ ಮುನ್ನ ತುರ್ತು ಕುಟುಂಬ ನಿರ್ವಹಣೆಗಾಗಿ ಸೇವೆಯಲ್ಲಿರುವಾಗ ಮೃತಪಟ್ಟಲ್ಲಿ ರೂ. 10,000/-ಗಳ ಧನಸಹಾಯ, ನಿವೃತ್ತಿಯ ನಂತರ ಮೃತಪಟ್ಟಲ್ಲಿ ರೂ.5,000/-ಗಳ ಧನಸಹಾಯವನ್ನು ನೀಡಲಾಗುವುದು.


3) ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಧನ ಸಹಾಯ:

ಶಿಕ್ಷಕರಿಗೆ ಹಾಗೂ ನಿವೃತ್ತ ಶಿಕ್ಷಕರಿಗೆ ಪಿ.ಯು.ಸಿ ಯಿಂದ ಪದವಿ ತರಗತಿಗಳಲ್ಲಿ (ಡಿಪ್ಲೊಮಾ ಸೇರಿದಂತೆ) ವ್ಯಾಸಂಗ ಮಾಡುತ್ತಿರುವ ಅವರ ಮಕ್ಕಳ ವ್ಯಾಸಂಗಕ್ಕಾಗಿ ಕೋರ್ಸುಗಳನ್ನು ಆಧರಿಸಿ ಕನಿಷ್ಠ ರೂ. 1,000/- ರಿಂದ ಗರಿಷ್ಠ          ರೂ. 3,000/-ಗಳ ಧನಸಹಾಯವನ್ನು ನೀಡಲಾಗುತ್ತಿದೆ.


4)ಶಿಕ್ಷಕರ / ನಿವೃತ್ತ ಶಿಕ್ಷಕರ ಮಕ್ಕಳಿಗೆ ಪ್ರತಿಭಾ ವಿದ್ಯಾರ್ಥಿ ವೇತನ:

ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಪದವಿ ಹಾಗೂ ಸ್ನಾತಕೋತ್ತರ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕ ಗಳಿಸಿದಂತಹ ಶಿಕ್ಷಕರ ಮಕ್ಕಳಿಗೆ ಪ್ರತಿಭಾ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ.


5) ಗುರುಭವನಗಳ ಹಾಗೂ ಅತಿಥಿ ಗೃಹಗಳ ನಿರ್ಮಣಕ್ಕೆ ಅನುದಾನ:

ಶಿಕ್ಷಕರ ಸಭೆ, ಸಮಾರಂಭ ಮತ್ತು ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲು ತಾಲ್ಲೂಕು/ಜಿಲ್ಲಾ  ಕೇಂದ್ರಗಳಲ್ಲಿ ನಿರ್ಮಿಸುವ ಗುರುಭವನಕ್ಕೆ ಸಭಾಂಗಣದ ವಿಸ್ತೀರ್ಣವನ್ನಾಧರಿಸಿ ಕನಿಷ್ಠ ರೂ.12 ಲಕ್ಷದಿಂದ ಗರಿಷ್ಠ 30 ಲಕ್ಷ ರೂಗಳ ವರೆವಿಗೂ ಅನುದಾನವನ್ನು ಹಾಗೂ ಅತಿಥಿಗೃಹಗಳ ನಿರ್ಮಾಣಕ್ಕೆ (ತಲಾ ಕೊಠಡಿಗೆ ರೂ.1,10,000/-ರಂತೆ) ಗರಿಷ್ಠ 11 ಲಕ್ಷ ರೂಗಳ ಅನುದಾನವನ್ನು ನೀಡಲಾಗುತ್ತದೆ.


6) ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯಿಂದ ಶಿಕ್ಷಕರಿಗೆ ನೀಡುವ ವಿವಿಧ ಪ್ರಶಸ್ತಿಗಳು:

ಶ್ಲಾಘನೀಯ ಸೇವೆ ಸಲ್ಲಿಸಿದ ಪ್ರಾಥಮಿಕ/ಪ್ರೌಢಶಾಲಾ ಶಿಕ್ಷಕರನ್ನು ಗುರುತಿಸಿ ಜಿಲ್ಲಾ / ರಾಜ್ಯ ಮಟ್ಟದ ವಿಶೇಷ ಶಿಕ್ಷಕ / ಉತ್ತಮ ವಿಜ್ಞಾನ ಶಿಕ್ಷಕ  ಪ್ರಶಸ್ತಿಗಳನ್ನು ನೀಡಲಾಗುವುದು.


7) ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ವಿಜೇತರಾದ ಶಿಕ್ಷಕರಿಗೆ ಪ್ರಶಸ್ತಿ :

ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಗಳ ಆಯೋಜನೆ ಮಾಡಲಾಗುತ್ತದೆ. ರಾಜ್ಯ ಮಟ್ಟದಲ್ಲಿ ಮೊದಲ ಮೂರು ಪ್ರಶಸ್ತಿ ಪಡೆದ ಶಿಕ್ಷಕರಿಗೆ ತಲಾ ರೂ. 5,000/- ರೂ. 3,000/- ಹಾಗೂ ರೂ. 2,000/- ಗಳ ನಗದು ಪ್ರಶಸ್ತಿ ನೀಡಲಾಗುತ್ತದೆ.  ರಾಜ್ಯ ಮಟ್ಟದಲ್ಲಿ ಕಲಿಕಾ ವಸ್ತುಗಳ ತಯಾರಿಕೆ ಸ್ಪರ್ಧೆಯಲ್ಲಿ ಭಾಗವಹಿಸಿದ ಶಿಕ್ಷಕರಿಗೆ ತಯಾರಿಕಾ ವೆಚ್ಚವಾಗಿ ರೂ. 500/-ರ ಮೊತ್ತವನ್ನು ಹೆಚ್ಚುವರಿಯಾಗಿ ನೀಡಲಾಗುತ್ತದೆ


8) ಶಿಕ್ಷಕರಿಗೆ ಸುರಕ್ಷಾ ಪರಿಹಾರ ಯೋಜನೆ:

ಅಪಘಾತಗಳಿಂದಾಗಿ ಮೃತ ಹೊಂದಿದ ಸರ್ಕಾರಿ ಹಾಗೂ ಅನುಮೋದಿತ ಅನುದಾನಿತ ಶಾಲಾ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಾಥಮಿಕ ಶಾಲಾ ಹಂತದಿಂದ ವಿಶ್ವವಿದ್ಯಾಲಯದ ಹಂತದವರೆಗಿನ ಶಿಕ್ಷಕರುಗಳಿಗೆ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ವತಿಯಿಂದ ಸುರಕ್ಷಾ ಪರಿಹಾರ ಯೋಜನೆ” ಯನ್ನು ಜಾರಿಗೆ ತರಲಾಗಿದೆ.  ಈ ಯೋಜನೆಯಡಿ ಶಿಕ್ಷಕರ ಕುಟುಂಬದವರಿಗೆ ರೂ. 50,000/- ವರೆಗೆ ಪರಿಹಾರ ಧನ ನೀಡಲಾಗುತ್ತಿದೆ


9) ಲ್ಯಾಪ್ ಟಾಪ್ ಖರೀದಿಗಾಗಿ ಬಡ್ಡಿ ರಹಿತ ಸಾಲ:

ಲ್ಯಾಪ್ ಟಾಪ್ ಖರೀದಿಗಾಗಿ ಪ್ರತಿ ತಾಲ್ಲೂಕಿನ 10 ಶಿಕ್ಷಕರುಗಳಿಗೆ ತಲಾ ರೂ. 30,000/- ಗಳ ಬಡ್ಡಿ ರಹಿತ ಸಾಲ ನೀಡಿ, ಮುಂದಿನ 10 ತಿಂಗಳಲ್ಲಿ ತಿಂಗಳಿಗೆ ರೂ. 3,000/- ದಂತೆ ಸಂಬಳದಲ್ಲಿ ಕಟಾಯಿಸಿ ಬಡ್ಡಿರಹಿತವಾಗಿ ಹಿಂಪಡೆಯಲಾಗುವುದು


ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನ, ನವದೆಹಲಿಯಿಂದ ಶಿಕ್ಷಕರಿಗೆ ನೀಡಲಾಗುತ್ತಿರುವ ಸೌಲಭ್ಯಗಳು

1) ಶಿಕ್ಷಕರಿಗೆ ಹಾಗೂ ಅವರ ಅವಲಂಬಿತರಿಗೆ ವೈದ್ಯಕೀಯ ಚಿಕಿತ್ಸೆಗೆ ಧನಸಹಾಯ :

ಶಿಕ್ಷಕರಿಗೆ / ನಿವೃತ್ತ ಶಿಕ್ಷಕರಿಗೆ ಹಾಗೂ ಅವರ ಅವಲಂಬಿತರಿಗೆ  ಮಾರಕ ರೋಗಗಳ ಚಿಕಿತ್ಸೆಗಾಗಿ ವೈದ್ಯಕೀಯ ಧನಸಹಾಯವನ್ನು ನೀಡಲಾಗುತ್ತದೆ.


2) ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಧನಸಹಾಯ :

ರಾಜ್ಯಮಟ್ಟದಲ್ಲಿ ವೈಜ್ಞಾನಿಕ ಹಾಗೂ ವಿನೂತನ ಶೈಕ್ಷಣಿಕ ಪ್ರಯೋಗಗಳನ್ನು ಮಾಡಿದ ಎಂಟು ಜನ (ಪ್ರಾಥಮಿಕ-4 ಮತ್ತು ಪ್ರೌಢ-4) ಶಿಕ್ಷಕರಿಗೆ ತಲಾ ರೂ.12,000/-ಗಳ ನಗದು ಬಹುಮಾನ ಒಳಗೊಂಡಂತೆ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಪ್ರತಿ ವರ್ಷ ಅರ್ಹ ಶಿಕ್ಷಕರಿಂದ ಈ ಪ್ರಶಸ್ತಿಗೆ ಕ್ಷೇತ್ರಶಿಕ್ಷಣಾಧಿಕಾರಿಗಳ ಮೂಲಕ ಅರ್ಜಿಗಳನ್ನು ಪಡೆಯಲಾಗುತ್ತದೆ.


3)ಗುರುಭವನಗಳ ನಿರ್ಮಾಣಕ್ಕೆ ಅನುದಾನ :

ಐತಿಹಾಸಿಕ ಜಿಲ್ಲಾ ಕೇಂದ್ರಗಳಲ್ಲಿ ಗುರುಭವನ ನಿರ್ಮಾಣಕ್ಕೆ ಸೂಕ್ತ ದಾಖಲೆಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿದಲ್ಲಿ ರಾ.ಶಿ.ಕ.ಪ್ರ.ನವದೆಹಲಿಯ ವತಿಯಿಂದ ರೂ.20 ಲಕ್ಷಗಳವರೆಗೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗುತ್ತದೆ.


ವಿದ್ಯಾರ್ಥಿಗಳಿಗೆ ನೀಡುವ ಸೌಲಭ್ಯಗಳು :

1) ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಗಳಲ್ಲಿ ಶೇ.100 ರಷ್ಟು ಫಲಿತಾಂಶ ಪಡೆದ ಶಾಲೆ/ ಪದವಿ ಪೂರ್ವ ಕಾಲೇಜುಗಳಿಗೆ ಪ್ರೋತ್ಸಾಹಧನ :

ಎಸ್.ಎಸ್.ಎಲ್.ಸಿ/ಪಿ.ಯು.ಸಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಪಡೆದ 30 ಕ್ಕಿಂತ ಹೆಚ್ಚು ಮಕ್ಕಳು ಅಭ್ಯಾಸ ಮಾಡುತ್ತಿರುವಂತಹ  ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಿಗೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ರೂ. 10,000/-ಗಳ ಪ್ರೋತ್ಸಾಹಧನ ನೀಡಲಾಗುತ್ತಿದೆ. ಅನುದಾನ ರಹಿತ ಶಾಲಾ ಕಾಲೇಜುಗಳಿಗೆ ಅಭಿನಂದನಾ ಫಲಕ ನೀಡಿ ಜಿಲ್ಲಾ ಮಟ್ಟದಲ್ಲಿ ಗೌರವಿಸಲಾಗುತ್ತಿದೆ.


2) ಎನ್.ಟಿ.ಎಸ್.ಇ ವಿದ್ಯಾರ್ಥಿ ವೇತನ :

ರಾಜ್ಯಮಟ್ಟದ ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ (ಎನ್.ಟಿ.ಎಸ್.ಇ) ಉತ್ತೀರ್ಣರಾಗಿ ರಾಷ್ಟ್ರ ಮಟ್ಟದಲ್ಲಿ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿಯ  ವತಿಯಿಂದ ವಾರ್ಷಿಕ ರೂ.2,000/- ರಂತೆ ಎರಡು ವರ್ಷಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.


3) ಅರ್ಹ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ/ಪರೀಕ್ಷಾ ಶುಲ್ಕ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ:

ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿಗೆ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ವಂತಿಗೆಯ ಶೇ.50 ಭಾಗವನ್ನು ಮತ್ತು ಪದವಿ ಪೂರ್ವ ಕಾಲೇಜು(ಪಿಯುಸಿ), ಪ್ರಥಮ ದರ್ಜೆ ಹಾಗೂ ಇನ್ನಿತರೆ ಕಾಲೇಜುಗಳಿಂದ ಸಂಗ್ರಹಿಸಿದ ವಂತಿಗೆಯ ಶೇ.60 ಭಾಗವನ್ನು ಆಯಾ ಶಾಲಾ ಕಾಲೇಜುಗಳಲ್ಲಿ ಉಳಿಸಿಕೊಂಡು ವಿದ್ಯಾರ್ಥಿಗಳ ವಿದ್ಯಾಭಿವೃದ್ಧಿ ಕಾರ್ಯಕ್ರಮಗಳಿಗೆ ಉಪಯೋಗಿಸಿಕೊಳ್ಳಲು ಸಂಬಂಧಿಸಿದ ಶಾಲಾ / ಕಾಲೇಜುಗಳಿಗೆ ಅನುಮತಿ ನೀಡಲಾಗಿದೆ.


4) ಶೌರ್ಯ ಪ್ರಶಸ್ತಿ :

ಅಪಾಯ ಸನ್ನಿವೇಶಗಳಲ್ಲಿ ಅಸಾಧಾರಣ ಧೈರ್ಯ, ಸಮಯ ಪ್ರಜ್ಞೆ ಮತ್ತು ಸಾಹಸ ಪ್ರದರ್ಶಿಸಿ ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ರಾಜ್ಯ ಶೌರ್ಯ ಪ್ರಶಸ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ನಿಧಿಯ ವತಿಯಿಂದ ರೂ. 2,500/- ಗಳ ನಗದು ಪುರಸ್ಕಾರ ನೀಡಲಾಗುವುದು.


5) ಕ್ರೀಡಾ ಪ್ರಶಸ್ತಿ :

ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಲಾಗುವ ಶಾಲಾ ಕ್ರೀಡೆಗಳಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಮೂರು ಪ್ರಶಸ್ತಿಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಕ್ರಮವಾಗಿ ರೂ. 3,000/-, ರೂ. 2,500/- ಹಾಗೂ ರೂ.2,000/- ಗಳನ್ನು ವೈಯಕ್ತಿಕ ಬಹುಮಾನವಾಗಿ ಹಾಗೂ ಪ್ರಥಮ ಮೂರು ಪ್ರಶಸ್ತಿಗಳನ್ನು ಗೆದ್ದ ತಂಡಗಳಿಗೆ ಕ್ರಮವಾಗಿ ರೂ.2,000/-, ರೂ.1,500/- ಹಾಗೂ ರೂ.1,000/- ಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ.


6) ವಿದ್ಯಾರ್ಥಿಗಳಿಗೆ “ಸುರಕ್ಷಾ ಪರಿಹಾರ ಯೋಜನೆ’’:

ಅಪಘಾತಗಳಿಂದ ಮೃತ ಹೊಂದಿದ ಪ್ರಾಥಮಿಕ ಶಾಲಾ ಹಂತದಿಂದ ವಿಶ್ವವಿದ್ಯಾಲಯದ ಹಂತದವರೆಗೆ ವ್ಯಾಸಂಗ ಮಾಡುತ್ತಿರುವ ರೆಗ್ಯೂಲರ್ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ವತಿಯಿಂದ “ವಿದ್ಯಾರ್ಥಿ ಸುರಕ್ಷಾ ಪರಿಹಾರ ಯೋಜನೆ” ಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಡಿ ವಿದ್ಯಾರ್ಥಿಯ ಪೋಷಕರಿಗೆ ರೂ. 50,000/- ಪರಿಹಾರ ಧನ ನೀಡಲಾಗುತ್ತಿದೆ.


7) ವಿದ್ಯಾರ್ಥಿಗಳಿಗೆ ವೈದ್ಯಕೀಯ ಧನಸಹಾಯ :

ಪ್ರಾಥಮಿಕ ಶಾಲಾ ಹಂತದಿಂದ ವಿಶ್ವವಿದ್ಯಾಲಯದ ಹಂತದವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಖಾಯಿಲೆಯ ತೀವ್ರತೆಯನ್ನು ಆಧರಿಸಿ ಗರಿಷ್ಠ ರೂ. 50,000/-ಗಳ ಮಿತಿಗೊಳಪಟ್ಟು ವೈದ್ಯಕೀಯ ಧನಸಹಾಯವನ್ನು ನೀಡಲಾಗುತ್ತಿದೆ.


ಎ) ಜಿಲ್ಲಾ ಮಟ್ಟದಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ :

ಜಿಲ್ಲಾ ಮಟ್ಟದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಕೆಳಕಂಡಂತೆ ನಗದು ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಗುತ್ತಿದೆ.

ಎಸ್.ಎಸ್.ಎಲ್.ಸಿ-ಪ್ರತಿ ಜಿಲ್ಲೆಗೆ ರೂ. 2,000/- ದಂತೆ   -10 ಪ್ರಶಸ್ತಿ


ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ      - 05 ಪ್ರಶಸ್ತಿ


 ಇತರೆ ಮಾಧ್ಯಮ ವಿದ್ಯಾರ್ಥಿಗಳಿಗೆ           - 05 ಪ್ರಶಸ್ತಿ


ಪಿಯುಸಿ - ಪ್ರತಿ ಜಿಲ್ಲೆಗೆ ರೂ.3,000/- ದಂತೆ     - 06 ಪ್ರಶಸ್ತಿ


 ವಿಜ್ಞಾನ ವಿಷಯದ ವಿದ್ಯಾರ್ಥಿಗಳಿಗೆ       - 02 ಪ್ರಶಸ್ತಿ


ಕಲಾ ವಿಷಯದ ವಿದ್ಯಾರ್ಥಿಗಳಿಗೆ             - 02 ಪ್ರಶಸ್ತಿ


ವಾಣಿಜ್ಯ ವಿಷಯದ ವಿದ್ಯಾರ್ಥಿಗಳಿಗೆ         -02 ಪ್ರಶಸ್ತಿ


ಏ) ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಸಹ-ಪಠ್ಯ ಚಟುವಟಿಕೆಗಳು :

ರಾಜ್ಯದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಸಾಂಸ್ಕೃತಿಕ ಸಹಪಠ್ಯ ಚಟುವಟಿಕೆಗಳ ಆಯೋಜನೆಗೆ ನಿಧಿಗಳಿಂದ ಅನುದಾನವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಬಿಡುಗಡೆ ಮಾಡಲಾಗುತ್ತದೆ.  ಚಟುವಟಿಕೆಗಳ ರೂಪುರೇಷೆ ಹಾಗೂ ಆಯೋಜನೆಯನ್ನು ಪದವಿ ಪೂರ್ವ ಶಿಕ್ಷಣ  ಇಲಾಖೆಯೇ ಮಾಡುತ್ತದೆ.

1 comment:

  1. How to download k2 challan for Punyakoti scheam

    ReplyDelete


ಆತ್ಮೀಯ ಶಿಕ್ಷಕ ಮಿತ್ರರೇ, ನಮ್ಮ ಸರ್ಕಾರಿ ಶಾಲೆ app ನಲ್ಲಿ ಯಾವುದೇ fileಗಳು ಡೌನ್ಲೋಡ್ ಆಗುತ್ತಿಲ್ಲವೆಂದು ರಾಜ್ಯದ ಸಾಕಷ್ಟು ಶಿಕ್ಷಕ ಮಿತ್ರರು ವಿಚಾರ ತಿಳಿಸಿರುತ್ತಾರೆ. ಇದು ತಾಂತ್ರಿಕ ಸಮಸ್ಯೆಯಿಂದ ಕೂಡಿರುವ ಕಾರಣದಿಂದ download ಆಗುತ್ತಿಲ್ಲ. ಒಂದು ವೇಳೆ ತಮಗೆ ಯಾವುದೇ ಫೈಲ್ಗಳನ್ನು ಡೌನ್ಲೋಡ್ ಮಾಡಬೇಕೆಂದರೆ ದಯವಿಟ್ಟು app ನಲ್ಲಿ ಮಾಡದೆ, www.nammasarakarishaale.com ಈ ಲಿಂಕ್ ನ್ನು ನಿಮ್ಮ google chrome browser ನಲ್ಲಿ ಒಪನ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು. ಧನ್ಯವಾದಗಳು, ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ .

APP DOWNLOAD HERE

NATIONAL LEADERS

www.nammasarakarishaale.com ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ...